ಆಂಡ್ರಿಯ, ಪೆಲೇಡಿಯೊ
(1508-80). ಇಟಲಿಯ ಶಿಲ್ಪಿ. ರೋಮಿನ ಪ್ರಾಚೀನ ಕಟ್ಟಡಗಳನ್ನು ಅಧ್ಯಯನ ಮಾಡಿ ತನ್ನ ಊರಾದ ವಿಸೆನ್‍ಸಾದಲ್ಲಿ ಶ್ರೀಮಂತರಿಗಾಗಿ ಅನೇಕ ಸುಂದರ ಕಟ್ಟಡಗಳನ್ನೂ ವೆನಿಸ್ ಪಟ್ಟಣದಲ್ಲಿ ಎರಡು ಚರ್ಚುಗಳನ್ನೂ ಕಟ್ಟಿದ. ವಾಸ್ತುಶಿಲ್ಪದ ಮೇಲೆ ಈತ ಬರೆದ (1570) ಗ್ರಂಥ ಯುರೋಪಿನ ವಾಸ್ತುಶಿಲ್ಪದ ಮೇಲೆ ವಿಶೇಷ ಪ್ರಭಾವ ಬೀರಿದೆ. ಈತ ಸರಕಟ್ಟು (ಟ್ರಸ್) ಎಂಬ ಹೊಸ ಮಾದರಿ ಚಾವಣಿಯನ್ನು ಸಂವಿಧಾನ ಮಾಡಿದ. ಸರಕಟ್ಟಿನ ಮೇಲೆ ಬರುವ ಒಟ್ಟು ಸ್ಥಿರ ಮತ್ತು ಚರಭಾರಗಳನ್ನು ಕಂಡುಹಿಡಿದ. ಆದರೆ ಗಣಿತ, ಭೌತಶಾಸ್ತ್ರಗಳ ನೆರವಿಲ್ಲದ್ದರಿಂದ ಸರಕಟ್ಟಿನ ಒಂದೊಂದು ಅಂಗದಲ್ಲೂ ಒತ್ತಡ ಅಥವಾ ಎಳೆತದ ತ್ರಾಸವನ್ನು ತಾತ್ತ್ವಿಕ ವಿಶ್ಲೇಷಣದಿಂದ ಲೆಕ್ಕಹಾಕಲು ಆಗ ಸಾಧ್ಯವಾಗಲಿಲ್ಲ.							 

(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ